Thursday, 13 December 2007

laali-haadu

ಮಲಗು ಮಗುವೇ, ಕಣ್ಣು-ಮುಚ್ಚಿ
ಅಮ್ಮ ಬರ್ತಾಳೆ,
ಮಲಗಿದ್ರೆ- ಅಮ್ಮ ಬರ್ತಾಳೆ

ಆಕಾಶದಾಗೆ ಅಮ್ಮನ ಊರು
ವಜ್ರದಂಗೆ ಹೊಳೆಯೋ ಊರು
ವಜ್ರದ ಬೆಳಕೈತೆ,
ಅಮ್ಮ ನಕ್ಕರೆ- ವಜ್ರದ ಬೆಳಕೈತೆ

ದೇವರು-ದಿಂಡ್ರು ಎಲ್ಲ ಸೇರ್ತಾರೆ
ಸಾವೇ ಬರ್ದಂಗೆ ಪಾನ ಹೀರ್ತಾರೆ
ಅಮ್ರುತ ತುಂಬೈತೆ,
ಅಮ್ಮನ ಕೈಲಿ- ಅಮ್ರುತ ತುಂಬೈತೆ

ಹಾಲಿನಂಗೆ ಹೊಳೆಯೋ ಮಕ್ಕಳು
ಹೂವಿನಂಗೆ ಸುಖವಾಗಿ ಮಲಗ್ತಾರೆ
ನಿದ್ದೆ ತಂದೈತೆ
ಅಮ್ಮನ ಲಾಲಿ- ಕಣ್ತುಂಬಾ ನಿದ್ದೆ ತಂದೈತೆ

ಮಲಗು ಮಗುವೇ, ಕಣ್ಣು-ಮುಚ್ಚಿ
ಅಮ್ಮ ಬರ್ತಾಳೆ,
ಮಲಗಿದ್ರೆ ಅಮ್ಮ ಬರ್ತಾಳೆ
ಮಲಗದಿದ್ರೆ ಗುಮ್ಮ ಬರ್ತಾನೆ