ಅರ್ಥ
ಅರ್ಥವಿಲ್ಲ...
ಅರ್ಥ ಹುಡುಕುವದರಲ್ಲಿ
ಮಗುವಿನ ನಗು - ಅಲ್ಲ ಜೀವನ
ಹಳೆಗನ್ನಡದ ಕಾವ್ಯ
ಸರಳ ರೇಖೆ - ಅಲ್ಲ ಬಂಧನ
ತುದಿ ಮೊದಲಿಲ್ಲದ ಹಗ್ಗ, ಗಂಟು
ಪೂರ್ಣ ವಿರಾಮ - ಅಲ್ಲ ಮೌನ
ಉತ್ತರವಿಲ್ಲದ ಪ್ರಶ್ನೆಯ ಆರಂಭ
ಸಕ್ಕರೆ ತುಪ್ಪ - ಅಲ್ಲ ಪ್ರೀತಿ
ಬತ್ತದ ಬಾವಿ, ತೀರದ ಋಣ
ಅರ್ಥವಿದ್ದೂ ಹತ್ತಿರವಿರದ ನೋವು
ಅರ್ಥವಿಲ್ಲದ ಸನಿಹದ ನಲಿವು
ಅರ್ಥ-ವ್ಯರ್ಥದ ಪ್ರಯತ್ನ
ಬೇವು-ಬೆಲ್ಲ ಬಾಳು ಕವನ
Sunday, 29 April 2007
Subscribe to:
Post Comments (Atom)
No comments:
Post a Comment