ಬೋರೇಗೌಡಂಗೆ ಬ್ಯಾಸರ ಬಂದು
ಪಟ್ಣಕ್ಕೆ ಬಂದ್ಬಿಟ್ಟ
ಹಳ್ಳಿ ಬಿಟ್ಬಿಟ್ಟ
ಕಾರು ನೋಡ್ದ, ಬಾರು ನೋಡ್ದ
ಕಾರ್-ಬಾರು ನೋಡ್ಬಿಟ್ಟ
ಭಾರಿ-ಭಾರಿ ಟೋಪಿ ಹಾಕೋ
ಭಂಡ್ರನ್ನ ನೋಡ್ಬಿಟ್ಟ
ಹಾಡೋರ್ನ ನೋಡ್ದ, ಬಾಡೋರ್ನ ನೋಡ್ದ
ಎಲ್ರು ಒಟ್ಟು ಓಡೋರ್ನ ನೋಡ್ಬಿಟ್ಟ
ದ್ವಜ ನೋಡ್ದ, ಗಜ ನೋಡ್ದ
ರೊಕ್ಕಕ್ಕೆ ಕುಣಿಯೋ ಮೈ-ಮಜ ನೋಡ್ಬಿಟ್ಟ
ಸಾಯೋರ್ನ ನೋಡ್ದ, ಸರಿಯೋರ್ನ ನೋಡ್ದ
ಸತ್-ಸತ್ತೇ ಬದುಕೋರ್ನ ನೋಡ್ಬಿಟ್ಟ
ಸಿಂಗಾರ್ ನೋಡ್ದ, ಬಂಗಾರ್ ನೋಡ್ದ
ಮತ್ತೆಚ್ಚಿ ಮೆರೆಯೋ ಮಂಗಾ-ರ್ ನೋಡ್ಬಿಟ್ಟ
ಬೋರೇಗೌಡ ಬ್ಯಾಸರ ಬಂದು
ಪಟ್ಟಣ ಬಿಟ್-ಬಿಟ್ಟ
ಪಾಟ ಕಲ್ತೆ, ಆಗೋಲ್ದಂತ
ಹಳ್ಳಿಗೆ ಹೊಂಟ್-ಬಿಟ್ಟ
Wednesday, 27 June 2007
Subscribe to:
Post Comments (Atom)
No comments:
Post a Comment