ಕಣ್ಣಾ-ಮುಚ್ಚೇ ಕಾಡೇ-ಗೂಡೇ
ಒಂದು, ಎರಡು, ಮುರು......ನೂರು
ಎಲ್ಲಿ ಮರೆಯಾದೆ ನೀನು?
ಎಂದು ಶುರುವಾಯ್ತು ಇಶ್ಟು ಗೊಂದಲ?
ನೀನತ್ತೆ, ನಾನು ಹಾಲುಣಿಸಿದೆ
ನಾನತ್ತೆ, ನೀನು ಭುಜವ ನೀಡಿದೆ
ನೀನು ಓದಿದೆ, ನಾನು ಜಗವ ಗೆದ್ದೆ
ಬಾಳು ಸಾರ್ಥಕ ಎಂದೆನಿಸುವಶ್ಟರಲ್ಲಿ....
ಎಲ್ಲಿ ಮರೆಯಾದೆ ನೀನು?
ಎಲ್ಲಿ ಬಚ್ಚಿಟ್ಟಿಕೊಂಡಿರುವೆ?
ಪೊಳ್ಳು-ಸಿರಿತನ, ಕಳ್ಳ-ನಗು ಹಿಂದೆ?
ಮಳ್ಳಿ-ಮಿಂಚುಳ್ಳಿ ನಾರಿಯ ಹಿಂದೆ?
ಎದೆಯ ಪಸರಿಹ ಟೊಳ್ಳು-ಕಾಗದದ ಹಿಂದೆ?
ಸೋತೆ, ಮಗು ನಾನು
ಇನ್ನು ನಿನ್ನ ಹುಡುಕಲಾರೆನು
ಉದ್ದಿನ-ಮುಟೆ ಉರುಳುವ ಮುನ್ನ
ಕೂಗಿ-ಕರೆ, ಓಮ್ಮೆ ಓಳಗಿಂದ
ದೂರ, ಅವಿತುಕೊಂಡ ತಾವಿನಿಂದ
- "ಅಮ್ಮ" ಎಂದು.
Tuesday, 3 July 2007
Subscribe to:
Post Comments (Atom)
No comments:
Post a Comment