Thursday, 13 December 2007

laali-haadu

ಮಲಗು ಮಗುವೇ, ಕಣ್ಣು-ಮುಚ್ಚಿ
ಅಮ್ಮ ಬರ್ತಾಳೆ,
ಮಲಗಿದ್ರೆ- ಅಮ್ಮ ಬರ್ತಾಳೆ

ಆಕಾಶದಾಗೆ ಅಮ್ಮನ ಊರು
ವಜ್ರದಂಗೆ ಹೊಳೆಯೋ ಊರು
ವಜ್ರದ ಬೆಳಕೈತೆ,
ಅಮ್ಮ ನಕ್ಕರೆ- ವಜ್ರದ ಬೆಳಕೈತೆ

ದೇವರು-ದಿಂಡ್ರು ಎಲ್ಲ ಸೇರ್ತಾರೆ
ಸಾವೇ ಬರ್ದಂಗೆ ಪಾನ ಹೀರ್ತಾರೆ
ಅಮ್ರುತ ತುಂಬೈತೆ,
ಅಮ್ಮನ ಕೈಲಿ- ಅಮ್ರುತ ತುಂಬೈತೆ

ಹಾಲಿನಂಗೆ ಹೊಳೆಯೋ ಮಕ್ಕಳು
ಹೂವಿನಂಗೆ ಸುಖವಾಗಿ ಮಲಗ್ತಾರೆ
ನಿದ್ದೆ ತಂದೈತೆ
ಅಮ್ಮನ ಲಾಲಿ- ಕಣ್ತುಂಬಾ ನಿದ್ದೆ ತಂದೈತೆ

ಮಲಗು ಮಗುವೇ, ಕಣ್ಣು-ಮುಚ್ಚಿ
ಅಮ್ಮ ಬರ್ತಾಳೆ,
ಮಲಗಿದ್ರೆ ಅಮ್ಮ ಬರ್ತಾಳೆ
ಮಲಗದಿದ್ರೆ ಗುಮ್ಮ ಬರ್ತಾನೆ

Tuesday, 7 August 2007

ಬಣ್ಣ

ಬಣದಾಗ ಬಣ್ಣ, ಅಂದ್ರೆ
ಬಣ್ಣ,ನನ್ನ ಚೆಲುವೀದು
ಗಲ್ಲದ್ ಕೆಂಪು, ಕಣ್ಣಿನ್ ಕಪ್ಪು
ಮಲ್ಲಿಗೆ ಮೈ, ಹೇಳಾಕೆ ಆಗೋಲ್ದು

ಬಣದಾಗ ಬಣ್ಣ, ಅಂದ್ರೆ
ಬಣ್ಣ,ನನ್ನ ರೊಕ್ಕದ್ದು
ಗಾಂಧೀ ಬಿಳುಪು,ಒಳಗೇ ಕಪ್ಪು
ಮಿಂಚಿನ್ ಅಂಚು,ಎಲ್ಲೂ ನಿಲವಲ್ದು

ಬಣದಾಗ ಬಣ್ಣ, ಅಂದ್ರೆ
ಬಣ್ಣ,ನನ್ನ ಹೆಂಡದ್ದು
ಬಾಟ್ಲು ಹಳದಿ, ಸುತ್ತಾ ಹಳದಿ
ಕಕ್ಕಿದ್ದ್ ಕೆಂಪು, ಹತ್ತಿದ್ ಇಳೀವಲ್ದು

ಬಣದಾಗ ಬಣ್ಣ, ಅಂದ್ರೆ
ಬಣ್ಣ, ಬಿಳೀ ಬಟ್ಟೇದು
ಬರೋಕ್ಕ್ ಬೇಕು,ಇರೋಕ್ಕ್ ಬೇಕು
ಕಡೇಗೆ, ಹೊರೋಕ್ಕೂ ಬೇಕಾದ್ದು
-MB

Saturday, 14 July 2007

Dementia

They came in Blue
They came in White
Knocked on my door
On a day without Light

"Come with us", "You Must"
Special our powers, Respect
"Off you go", to a 'Home'
Rest, you need, for rest of life

"What sin did I committ?"
"What soul did I hurt?"
Am I asking too-much,
My cat, my life, my little-nest

"Old, you are; Cold, you are"
"Worn-out box, brain of yours"
"Far your son, Cold your daughter"
"too busy, is your neighbour"

"Off I go", to a 'Home'
Now, I know, sin of mine
Loved, too-much, my little-nest
Lived, too-long, just to forget

-MB

chutuku

ಗಂಡನ ನುಡಿ-ಹೆಂಡತಿಗೆ:
"ನಿನ್ನ ಕೈ-ಅಡುಗೆ
ಅಮ್ರುತದಂತೆ"
"ಕಲ್ಪನೆಯಲ್ಲಿ ಮಾತ್ರ ಲಭ್ಯ,
ಅಮ್ರುತವೂ, ನಿನ್ನ ಅಡುಗೆಯೂ"

-MB

Tuesday, 3 July 2007

kanna-muchche aata

ಕಣ್ಣಾ-ಮುಚ್ಚೇ ಕಾಡೇ-ಗೂಡೇ
ಒಂದು, ಎರಡು, ಮುರು......ನೂರು
ಎಲ್ಲಿ ಮರೆಯಾದೆ ನೀನು?
ಎಂದು ಶುರುವಾಯ್ತು ಇಶ್ಟು ಗೊಂದಲ?

ನೀನತ್ತೆ, ನಾನು ಹಾಲುಣಿಸಿದೆ
ನಾನತ್ತೆ, ನೀನು ಭುಜವ ನೀಡಿದೆ
ನೀನು ಓದಿದೆ, ನಾನು ಜಗವ ಗೆದ್ದೆ
ಬಾಳು ಸಾರ್ಥಕ ಎಂದೆನಿಸುವಶ್ಟರಲ್ಲಿ....

ಎಲ್ಲಿ ಮರೆಯಾದೆ ನೀನು?
ಎಲ್ಲಿ ಬಚ್ಚಿಟ್ಟಿಕೊಂಡಿರುವೆ?

ಪೊಳ್ಳು-ಸಿರಿತನ, ಕಳ್ಳ-ನಗು ಹಿಂದೆ?
ಮಳ್ಳಿ-ಮಿಂಚುಳ್ಳಿ ನಾರಿಯ ಹಿಂದೆ?
ಎದೆಯ ಪಸರಿಹ ಟೊಳ್ಳು-ಕಾಗದದ ಹಿಂದೆ?

ಸೋತೆ, ಮಗು ನಾನು
ಇನ್ನು ನಿನ್ನ ಹುಡುಕಲಾರೆನು

ಉದ್ದಿನ-ಮುಟೆ ಉರುಳುವ ಮುನ್ನ
ಕೂಗಿ-ಕರೆ, ಓಮ್ಮೆ ಓಳಗಿಂದ
ದೂರ, ಅವಿತುಕೊಂಡ ತಾವಿನಿಂದ
- "ಅಮ್ಮ" ಎಂದು.

Wednesday, 27 June 2007

kailasam prerane

ಬೋರೇಗೌಡಂಗೆ ಬ್ಯಾಸರ ಬಂದು
ಪಟ್ಣಕ್ಕೆ ಬಂದ್ಬಿಟ್ಟ
ಹಳ್ಳಿ ಬಿಟ್ಬಿಟ್ಟ

ಕಾರು ನೋಡ್ದ, ಬಾರು ನೋಡ್ದ
ಕಾರ್-ಬಾರು ನೋಡ್ಬಿಟ್ಟ
ಭಾರಿ-ಭಾರಿ ಟೋಪಿ ಹಾಕೋ
ಭಂಡ್ರನ್ನ ನೋಡ್ಬಿಟ್ಟ

ಹಾಡೋರ್ನ ನೋಡ್ದ, ಬಾಡೋರ್ನ ನೋಡ್ದ
ಎಲ್ರು ಒಟ್ಟು ಓಡೋರ್ನ ನೋಡ್ಬಿಟ್ಟ
ದ್ವಜ ನೋಡ್ದ, ಗಜ ನೋಡ್ದ
ರೊಕ್ಕಕ್ಕೆ ಕುಣಿಯೋ ಮೈ-ಮಜ ನೋಡ್ಬಿಟ್ಟ

ಸಾಯೋರ್ನ ನೋಡ್ದ, ಸರಿಯೋರ್ನ ನೋಡ್ದ
ಸತ್-ಸತ್ತೇ ಬದುಕೋರ್ನ ನೋಡ್ಬಿಟ್ಟ
ಸಿಂಗಾರ್ ನೋಡ್ದ, ಬಂಗಾರ್ ನೋಡ್ದ
ಮತ್ತೆಚ್ಚಿ ಮೆರೆಯೋ ಮಂಗಾ-ರ್ ನೋಡ್ಬಿಟ್ಟ

ಬೋರೇಗೌಡ ಬ್ಯಾಸರ ಬಂದು
ಪಟ್ಟಣ ಬಿಟ್-ಬಿಟ್ಟ
ಪಾಟ ಕಲ್ತೆ, ಆಗೋಲ್ದಂತ
ಹಳ್ಳಿಗೆ ಹೊಂಟ್-ಬಿಟ್ಟ

Name

Deep inside
I still can feel you
Far in the mountains
I still can hear you

Why did you come?
To wake me up?
To make me a man?
To bake my cake?

Why did you stop?
Half-cooked was the cake
Still drowsy were my eyes
Off the ground were my feet

Why did you cry?
Painting of yours completed?
Poem of yours rhymed?
desires of yours fulfilled?

Why did you leave?
Had enough of me?
Mission accomplished?
New-one waiting for you?

I need no explanation
I need no compassion
I need a Name
I need a name for you
You help me choose one
Among thousands -
Earth, Nature, Mother
Woman, Lover, Human.......

-MB