Wednesday 2 May 2007

munisu

ಸುತ್ತ-ಮುತ್ತ ಒಂದು ಜೀವದ ಗುರುತಿಲ್ಲ, ಒಂದಿನಿತು ಶಬ್ದವಿಲ್ಲ. ನಾನು ಮತ್ತು ನನ್ನ ಹೆಜ್ಜೆಯ ಸಪ್ಪಳ...ಒಣಗಿದ ಎಲೆಯ ಮೇಲೆ ಕಾಲಿಡುತ್ತ, ಶಬ್ದಕ್ಕೆ ಹೆದುರುತ್ತ, ಪದೇ-ಪದೇ ಹಿಂತುರಿಗಿ ನೋಡುತ್ತ, ಓಡುವ ವೇಗದಲ್ಲಿ ನಡೆಯುತ್ತಿರುವ ನಾನು... ನನ್ನ ಎದೆಯ ಬಡಿತ, ಉಸಿರಿನ ಏರಿಳಿತ ಬಿಟ್ಟರೆ ಏನೊಂದು ತಿಳಿಯದ ಪರಿಸ್ತಿಥಿ. ಯುನಿವರ್ಸಿಟಿ ಒಳಗಿನ ವಿಶಾಲ ಕ್ಯಾಂಪಸ್, ಕ್ಯಾಂಪಸ್ ಒಳಗಿನ ಕವಲು ದಾರಿ, ದಾರಿಯ ಎರಡೂ ಬದಿಯಲ್ಲಿ ಎತ್ತರದ ಮರಗಳು, ಎಲ್ಲಿಂದಲೋ ಬೀಸುತ್ತಿರುವ ತಣ್ಣನೆ ಗಾಳಿ, ಆ ಚಳಿ-ಗಾಳಿಯಲ್ಲೂ ಬೆವರುತ್ತಿರವ ನಾನು. ತಲೆ ತುಂಬ ಒಂದೇ ಪ್ರಶ್ನೆ.... ನಾನವಳ ಮಾತು ಕೇಳಬೇಕಾಗಿತ್ತು...ನಡುರಾತ್ರಿಯಲ್ಲಿ ಅವಳ ಮೇಲೆ ಕೋಪಕ್ಕೆ ಇಶ್ಟು ದೂರ ನಡೆದು ಬರಬಾರದಿತ್ತು. ಬಂದಾಗಿದೆ... ತಿರುಗಿ ಹೋಗುವ ದಾರಿ ಸಿಗುತಿಲ್ಲ.... ಒಳಗೆ ಸಣ್ಣಗೆ ನಡುಕ. ಪಸೆ ಆರಿದ ಗಂಟಲು, ಕಾಣದ ಭಯ. "ಗಂಟೆ ಎಶ್ಟಾಯ್ತು ಮಗು?" ಎಲ್ಲಿಂದಲೋ ಧುತ್ತನೆ ಬಂದ ದ್ವನಿ ಕೇಳಿ ಹೌಹಾರಿದೆ.. ಸುತ್ತ ನೋಡಿದೆ ಕಣ್ಣಗಲಿಸಿ. ಉಣಸೆ ಮರದ ಹಿಂದಿಂನಿಂದ ಒಂದು ಅಜ್ಜಿ, ಕೋಲುರತ್ತ ನಿಧಾನವಾಗಿ ನಡೆಯತ್ತ ನನ್ನ ಬಳಿ ಬಂದಳು. ಯುನಿವರ್ಸಿಟಿ ಒಳಗೆ ಅಜ್ಜಿ? ಬಿಳಿ ಸೀರೆ, ಬಿಳಿ ಬಟ್ಟೆ, ಕತ್ತಲಲ್ಲಿ ಮುಖ ಕಾಣಿಸದು, ಕಾಲೂ ಕಾಣಿಸದು, ಸೀರೆ ನೆಲ ಮಟ್ಟುತಿದೆ. ಗಂಟಲಿಂದ ದ್ವನಿ ಬರದ ಹಾಗಾಗಿದೆ. ಎಲ್ಲ ಶಕ್ತಿ ಕೂಡಿಸಿ "ವಾಚಿಲ್ಲ ಅಜ್ಜಿ" ಎಂದು ಹೇಳಿ ಓಡಲು ತಯಾರಾದೆ. "ಜೇಬಲ್ಲಿ ವಾಚ್ ಇದಿಯಲ್ಲ ಮಗ, ನೋಡಿ ಹೇಳು". ನಾನು ಸ್ತಭ್ದನಾದೆ. ನನ್ನ ಜೇಬಲ್ಲಿ ವಾಚ್ ಇರೋ ವಿಶ್ಯ ಈ ಅಜ್ಜಿಗೆ ಹೇಗೆ ಗೊತ್ತಾಯ್ತು? ಈ ನಡು-ರಾತ್ರೀಲಿ ಈ ಅಜ್ಜಿಗೇನು ಕೆಲ್ಸ? ಟೈಮ್ ತಗೊಂಡು ಈ ಅಜ್ಜಿ ಏನು ಮಾಡತ್ತೆ? ಲಗಾಮಿಲ್ಲದ ಕುದುರೆಯ ಹಾಗೆ ನನ್ನ ಯೋಚನಾ-ಲಹರಿ ಸಾಗಿತ್ತು. ನೋಡಿದ ಹಾರರ್ ಸಿನೆಮಾಗಳು, ಕೇಳಿದ ಕಥೆಗಳು ಕಣ್ಣ ಮುಂದೆ ಸುಳಿದವು. "ಯಾವಾಗಲೂ ಜೇಬಲ್ಲೇ ವಾಚ್ ಇಟ್ಕೊಳ್ಳೊರು ಅವ್ರೂನು, ಕೈನಲ್ಲಿ ಬೆವರು ಬರತ್ತೆ ಅಂತ. ನಲವತ್ತು ವರ್ಶ ಆಗತ್ತೆ, ಜೂನ್ ಬಂದ್ರೆ. ಒಂದು ದಿನ ಹೀಗೆ ನನ್ನ ಜೊತೆ ಜಗಳ ಆಡ್ಕೊಂಡು ಇಲ್ಲೇ ಬಂದು ಕೂತಿದ್ದೋರು, ಭಾರಿ ಗಾಳಿ ಅವತ್ತು, ಮರ ಮೇಲೆ ಬಿದ್ದು, ತೀರ್ಕೊಂಡ್ರು. ನಾನು ಬರೋ ಹೊತ್ತಿಗೆ ಪ್ರಾಣ ಹೊಗಿತ್ತು. ಓದು ಮುಗ್ಸ್ಲಿಲ್ಲಿಲ್ಲ ನಾನು. ಈ ಯುನಿವರ್ಸಿಟಿ ಬಿಟ್ಟು ಹೊಗ್ಲಿಕ್ಕು ಅಗ್ಲಿಲ್ಲ. ಲೈಬ್ರರಿ ಅಸಿಸ್ಟಂಟ್ ಅಗಿ ಜೀವನ ಸಾಗಿಸ್ತಿದೀನಿ. ದಿನಾ ಇಲ್ಲಿ ಬಂದ್ರೆ ಮನಕ್ಕೆ ಶಾಂತಿ ಸಿಗತ್ತೆ. ಇವತ್ತು ಅವ್ರ ಹುಟ್ಟು ಹಬ್ಬ. ನಿದ್ದೆ ಹತ್ಲಿಲ್ಲ ಕಣ್ಣಿಗೆ. ಇಲ್ಲಿ ಬಂದು ಕೂತಿದಿನಿ. ಎಶ್ಟೋತ್ತು ಕೂತಿದಿನೋ ಗೊತ್ತೇ ಆಗಿಲ್ಲ. ನೀನು ಇಶ್ಟೊತ್ತಿನಲ್ಲಿ ಇಲ್ಲಿ ಏನು ಮಾಡ್ತಿದಿಯಪ್ಪ?" ಅಜ್ಜಿ ಹೇಳಿದ್ದು ಕೇಳಿ ಭಯ ಎಲ್ಲ ಹೋಗಿ ದಿಗಿಲು ಶುರುವಾಯ್ತು ನನ್ನ ಬಗ್ಗೆ, ನನ್ನವಳ ಬಗ್ಗೆ, ನನ್ನ ಸಣ್ಣತನದ ಬಗ್ಗೆ. ಓಡಿ ಹೋಗಿ ನನ್ನವಳ ಮನಸಾರೆ ಅಪ್ಪಿ ಅಳಬೇಕನ್ನಿಸಿತು. "ಒಂದು ಜೀವನ ಪಾಟ ಮರೆತಿದ್ದೆ ಅಜ್ಜಿ. ಸಿಟ್ಟಲ್ಲಿ ಇಲ್ಲಿ ಬಂದಿದ್ದೆ. ನಿನ್ನನ್ನು ವಾಪಸ್ ಮನೆಗೆ ಬಿಡ್ತೀನಿ ಬಾ ಅಜ್ಜಿ" ಅಂತ ಹೇಳಿ ಅಜ್ಜಿನಾ ಮನೆಗೆ ಬಿಟ್ಟು ಹೊರಡುವಾಗ, ಅಜ್ಜಿ ಹೇಳಿದಾ ಮಾತು ನಾನು ಇನ್ನು ಮರೆತಿಲ್ಲ "ಮಾತಿಂದ ಬರೋ ಸಮಸ್ಯೆಗೆ ಮಾತೇ ಪರಿಹಾರ ಮಗು. ಹಂಚಿಕೊಂಡು ತಿಂದ್ರೆ ವಿಶ ಕೂಡ ವಿನಾಶ ಮಾಡಲ್ಲ"

2 comments:

ಜಯಂತ ಬಾಬು said...

"ಮಾತಿಂದ ಬರೋ ಸಮಸ್ಯೆಗೆ ಮಾತೇ ಪರಿಹಾರ ಮಗು. ಹಂಚಿಕೊಂಡು ತಿಂದ್ರೆ ವಿಶ ಕೂಡ ವಿನಾಶ ಮಾಡಲ್ಲ"...


ಇದೊಂದೇ ಸಾಕಿತ್ತು ...ಯಾವ ಉದಾಹರಣೆ ಕೊಟ್ಟಿದ್ರೂ..ಪೂರಕವಾಗಿ ಇರತಿತ್ತು.ನಿಮ್ಮ ಕಥೆ ಹೇಳೋ ಹೆಣೆಯುವ ಟ್ಯಾಲೆಂಟ್ ತುಂಬ ಹಿಂದಿನಿಂದ ನೋಡಿರೊದ್ರಿಂದ ..ಶಾಕ್ ಆಗ್ತ ಇಲ್ಲ ..ಸೂಪರ್...

Unknown said...

putta sakathagide..............keep going..........